Feedback / Suggestions

History of the Institute

ಪ್ರಮುಖ ಚಟುವಟಿಕೆಗಳು 
ಡಿದೇವರಾಜ ಅರಸು ಸಂಶೋಧನಾ ಸಂಸ್ಥೆಯವತಿಯಿಂದ ನಡೆಸಲಾದ ಪ್ರಮುಖ ಚಟುವಟಿಕೆಗಳು:

  1. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ Project Oriented Specialised Training Programme (Central Institute of Plastic Engineering & Technology)
  2. Implementation of Training Programme in Carpet making.
  3. Survey & Demography & Collection of Statistics & Documentation.
  4. Multisectoral Development Plan for Minorities in Karnataka State.
  5. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ಅತ್ಯಂತ ಹಿಂದುಳಿದ ಜನಾಂಗವಾದ “ಕುಣಬಿ” ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಾಗಾರ.
  6. ಅಲ್ಪಸಂಖ್ಯಾತರ ಬಹುಮುಖ ಅಭಿವೃದ್ಧಿ ಯೋಜನೆ ಕುರಿತು ಬೀದರ್, ಬಿಜಾಪುರ ಹಾಗೂ ಗುಲ್ಬರ್ಗಾ ಜಿಲ್ಲೆಗಳಲ್ಲಿ ಸಮೀಕ್ಷೆ.
  7. ಅತ್ಯಂತ ಹಿಂದುಳಿದ ಜನಾಂಗವಾದ “ಕುಣಬಿ” ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಾರ್ಯಾಗಾರ.
  8. ಅತ್ಯಂತ ಹಿಂದುಳಿದ ಜನಾಂಗವಾದ “ಹೆಳವ” ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಧಾರವಾಡ ಜಿಲ್ಲೆಯಲ್ಲಿ ಕಾರ್ಯಾಗಾರ.
  9. ರಾಜ್ಯದ ಹಿಂದುಳಿದ ವರ್ಗಗಳ ಇಲಾಖೆಯ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಡಿ. ದೇವರಾಜ ಅರಸು ರವರ ಚಿತ್ರಪುಟಗಳ ಪೂರೈಕೆ.
  10. ಬೀದರ್ ಹಾಗೂ ಬಿಜಾಪುರದಲ್ಲಿ “ಅಲ್ಪಸಂಖ್ಯಾತರ ಬಹುಮುಖ ಅಭಿವೃದ್ಧಿ ಯೋಜನೆ” ಬಗ್ಗೆ ವಿಚಾರ ಸಂಕಿರಣ ಮತ್ತು ಅರಿವು ಮೂಡಿಸುವ ಕಾರ್ಯಾಗಾರ.
  11. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಡಿ. ದೇವರಾಜ ಅರಸುರವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ.
  12. “ಕುಲಕಸುಬುದಾರರ ಶಿಕ್ಷಣ ಮತ್ತು ಉದ್ಯೋಗ-ಸಾಧಕ : ಬಾಧಕಗಳು” ವಿಷಯದ ಬಗ್ಗೆ ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ಬೆಂಗಳೂರಿನಲ್ಲಿ ಹಾಗೂ ವಿಭಾಗಮಟ್ಟದ ವಿಚಾರಗೋಷ್ಠಿಗಳನ್ನು ಕೊಪ್ಪಳ, ತುಮಕೂರು, ಧಾರವಾಡ ಹಾಗೂ ಚಿಕ್ಕಮಗಳೂರಿನಲ್ಲಿ ನಡೆಸಲಾಗಿದೆ.
  13. “ಖಾಸಗಿ ವಲಯದಲ್ಲಿ ಮೀಸಲಾತಿ” ವಿಷಯ ಕುರಿತು (Affirmative Action in Private Sector) ರಾಷ್ಟ್ರೀಯ ಕಾನೂನು ಶಾಳೆಯ ಸಹಹಯೋಗದಲ್ಲಿ (NLSIU) 2 ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ನಡೆಸಲಾಗಿದೆ.  ಈ ವಿಷಯ ಕುರಿತು “The Bangalore Initiative” ಎಂಬ ವರದಿಯನ್ನು ಹೊರತರಲಾಗಿದೆ.
  14. ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ದೇವರಾಜ ಅರಸುರವರ ಜನ್ಮದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣಗಳನ್ನು ನಡೆಸಿ, ಆ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳನ್ನು “ಸಮಾಜ ಕಲ್ಯಾಣದ ದಾರ್ಶನಿಕ ದ್ರಷ್ಟ್ರಾರ” ಪುಸ್ತಕದ ಮೂಲಕ ಹೊರತರಲಾಗಿದೆ.
  15. ಕೋಲಾರ, ಬೆಳಗಾಂ ಹಾಗೂ ಗುಲ್ಬರ್ಗಾ ಜಿಲ್ಲೆಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಸಮೀಕ್ಷೆ ಮಾಡಿ, ಅದರ ಸಿಬ್ಬಂದಿಗಳಿಗಾಗಿ ಆಯಾ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗಿದೆ.
  16. ಡಿ. ದೇವರಾಜ ಅರಸು ರವರ ಜನ್ಮದಿನಾಚರಣೆ ಅಂಗವಾಗಿ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ನಡೆಸಿದ್ದು, ಈ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳನ್ನು “ಮೀಸಲಾತಿ ಪ್ರಸ್ತುತತೆ” ಎಂಬ ಪುಸ್ತಕ ರೂಪದಲ್ಲಿ ಹೊರತರಲಾಗಿದೆ.
  17. ಡಿ. ದೇವರಾಜ ಅರಸು ರವರ ಚಿಂತನೆ-ಸಾಧನೆಗಳ ಬಗ್ಗೆ ಕನ್ನಡದಲ್ಲಿ “ಸಾಧನೆಗಳ ಸರದಾರ”, “ದೇವರಾಜ ಅರಸು : ಚಿಂತನೆ-ಸಾಧನೆ” ಹಾಗೂ ಆಂಗ್ಲದಲ್ಲಿ “Devaraj Urs-The Champion of Social Justice” ಪುಸ್ತಕಗಳನ್ನು ಪ್ರಕಟಿಸಲಾಗಿದೆ.
  18. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗಾಗಿ ಬೆಂಗಳೂರಿನಲ್ಲಿ “Equilibrium Thinking” ಕಾರ್ಯಾಗಾರವನ್ನು ನಡೆಸಲಾಗಿದೆ.
  19. “ಮಾಹಿತಿ ತಂತ್ರಜ್ಞಾನ ಮತ್ತು ಹಿಂದುಳಿದ ವರ್ಗಗಳು” ವಿಷಯ ಕುರಿತು ಬೆಂಗಳೂರಿನಲ್ಲಿ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ನಡೆಸಲಾಗಿದೆ.
  20. “ಗಂಗಾ ಕಲ್ಯಾಣ” ಯೋಜನೆಯ ಅನುಷ್ಠಾನದ ಬಗ್ಗೆ ತುಮಕೂರು, ಉಡುಪಿ, ಬೀದರ್ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಮೀಕ್ಷೆ ಹಾಗೂ ಮೌಲ್ಯಮಾಪನವನ್ನು ನಡೆಸಲಾಗಿದೆ.
  21. “ಗೌಳಿ” ಜನಾಂಗದ ಸ್ಥಿತಿಗತಿಗಳ ಬಗ್ಗೆ ಅಧ್ಯಯನವನ್ನು ಹಾಗೂ ಕಾರ್ಯಾಗಾರವನ್ನು ನಡೆಸಲಾಗಿದೆ.
  22. “ಹಾಲಕ್ಕಿ ವಕ್ಕಲ್” ಜನಾಂಗದ ಸ್ಥಿತಿಗತಿಗಳ ಬಗ್ಗೆ ಅಧ್ಯಯನವನ್ನು ಹಾಗೂ ಕಾರ್ಯಾಗಾರವನ್ನು ನಡೆಸಲಾಗಿದೆ.
  23. ಹಂಪಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬುಂಡೇ ಬೆಸ್ತರು, ಗೊಂದಲಿಗರು, ಹೆಳವರು ಹಾಗೂ ಸಿಕ್ಕಲಿಗರು ಈ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದವರ ಅಧ್ಯಯನವನ್ನು ನಡೆಸಲಾಗಿದೆ.
  24. “ಖಾಸಗೀಕರಣ, ಜಾಗತೀಕರಣ ಮತ್ತು ಹಿಂದುಳಿದ ವರ್ಗಗಳು” ವಿಷಯ ಕುರಿತು ದಕ್ಷಿಣ ಭಾರತ ಮಟ್ಟದ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ.
  25. ಬೀದರ್, ಬಾಗಲಕೋಟೆ ಹಾಗೂ ಮಂಗಳೂರಿನಲ್ಲಿ “ಮೀಸಲಾತಿ ಮತ್ತು ಸ್ಥಳೀಯ ಆಡಳಿತ” ವಿಷಯ ಕುರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ.
  26. “ಮಹಿಳಾ ಸಬಲೀಕರಣ” ವಿಷಯ ಕುರಿತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಭಾರತ ಮಟ್ಟದ ವಿಚಾರ ಸಂಕಿರಣವನ್ನು ನಡೆಸಲಾಗಿದೆ.
  27. “ರಾಷ್ಟ್ರೀಯ ಭಾವೈಕ್ಯತೆ” ವಿಷಯ ಕುರಿತು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ/ಭಾಷಣ/ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಲಾಗಿದೆ.
  28. “ದೇವಾಡಿಗ” ಮತ್ತು ಲಾಡರು” ಜನಾಂಗದ ಸಮೀಕ್ಷೆಯನ್ನು ಕೈಗೊಂಡು “ಲಾಡರು” ಜನಾಂಗದ ಕಾರ್ಯಾಗಾರವನ್ನು ಬೆಳಗಾವಿಯಲ್ಲಿ ನಡೆಸಲಾಗಿದೆ.
  29. “ಕೋಮು ಸೌಹಾರ್ಧತೆ” ವಿಷಯ ಕುರಿತು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ/ಭಾಷಣ/ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಲಾಗಿದೆ.
  30. ಡಿ. ದೇವರಾಜ ಅರಸು ರವರ ಜೀವನ – ಸಾಧನೆಗಳ ಕುರಿತು “ಸಾಕ್ಷ್ಯಚಿತ್ರ”ವನ್ನು ನಿರ್ಮಿಸಿ, ಡಿ. ದೇವರಾಜ ಅರಸು ರವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ.
  31. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಂಡಿರುವ “ನ್ಯೂ ಸ್ವರ್ಣಿಮಾ” ಯೋಜನೆಯ ಸಮೀಕ್ಷೆಯನ್ನು ನಡೆಸಲಾಗಿದೆ.
  32. ಹಿಂದುಳಿದ ವರ್ಗಗಳ ಜನರಿಗಾಗಿ ಸರ್ಕಾರದಿಂದ ಅನುಷ್ಠಾನಗೊಂಡಿರುವ ಯೋಜನೆಗಳ ಮಾಹಿತಿಯನ್ನೊಳಗೊಂಡ “ಅಭಿವೃದ್ಧಿ ಪಥದಲ್ಲಿ ಹಿಂದುಳಿದ ವರ್ಗಗಳು” ಕಿರುಹೊತ್ತಿಗೆಯನ್ನು ಹೊರತರಲಾಗಿದೆ.
  33. ರಾಜ್ಯದ ಎಲ್ಲಾ ಜಿಲ್ಲೆಗಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಸಿಬ್ಬಂದಿಗಳಿಗೆ “ವೃತ್ತಿ ಉತ್ಕೃಷ್ಠತೆ” ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ.
  34. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇಕಡಾವಾರು ಕಡಿಮೆ ಫಲಿತಾಂಶವನ್ನು ಹೊಂದಿರುವ ಜಿಲ್ಲೆಗಳಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿರುವ ನಿಲಯಾರ್ಥಿಗಳಿಗೆ ತರಬೇತಿ ನೀಡಲು ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಕೋಲಾರ, ಚಿಕ್ಕಬಳ್ಳಾಪುರ, ಬೀದರ್,  ಗುಲ್ಬರ್ಗಾ, ಯಾದಗಿರಿ, ಬಿಜಾಪುರ, ರಾಯಚೂರು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಜಿಲ್ಲಾವಾರು ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸಲಾಗಿದೆ.
  35. ಹಿಂದುಳಿದ ವರ್ಗಗಳ ಎಲ್.ಜಿ. ಹಾವನೂರು ಆಯೋಗದ 4 ಸಂಪುಟಗಳ ವರದಿಯನ್ನು ಮರುಮುದ್ರಣ ಮಾಡಿಸಲಾಗಿದೆ.
  36. ಡಿ. ದೇವರಾಜ ಅರಸು ರವರ ಜೀವನ ಸಾಧನೆಗಳನ್ನು ಒಳಗೊಂಡ ‘’ಅರಸು ಆಲ್ಬಂ” ನ್ನು ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಹೊರತರಲಾಗಿದೆ.
  37. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಕೇಂದ್ರ ಸರ್ಕಾರದ “ಕೆನೆ ಪದರ ನೀತಿ” ಕುರಿತು ಕಾನೂನು ತಜ್ಞರು ಹಾಗೂ ವಿವಿಧ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚಿಂತನಾ ಸಭೆಯನ್ನು ನಡೆಸಲಾಗಿದೆ.
  38. ಅತೀ ಹಿಂದುಳಿದ ಅಲೆಮಾರಿ/ಅರೆಅಲೆಮಾರಿ ಜನಾಂಗವಾದ “ಹೆಳವ” ಜನಾಂಗದ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.
  39. ಅತೀ ಹಿಂದುಳಿದ ಅಲೆಮಾರಿ/ಅರೆಅಲೆಮಾರಿ ಜನಾಂಗವಾದ “ಹೆಳವ” ಜನಾಂಗದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆಸಲಾಗಿದೆ.
  40. ಮಾನವ ಹಕ್ಕುಗಳ ಆಯೋಗವು ಸೂಚಿಸಿರುವಂತೆ ‘ಕಾಡುಗೊಲ್ಲ’ ಜನಾಂಗದ ವಿಚಾರ ಸಂಕಿರಣವನ್ನು ದಿನಾಂಕ: 16-12-2013 ಹಾಗೂ 17-12-2013 ರಂದು ತ.ರಾ.ಸು. ರಂಗಮಂದಿರ, ಬಿ.ಡಿ. ರಸ್ತೆ, ಚಿತ್ರದುರ್ಗ  ಇಲ್ಲಿ ನಡೆಸಲಾಗಿದೆ.

 

 

 

Last Updated: 04-03-2021 07:14 PM Updated By: Admin



Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : D DEVARAJ URS RESEARCH INSTITUTE BENGALURU
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080